ಹುಬ್ಬಳ್ಳಿ ನಗರ: ನಗರದಲ್ಲಿ ವಾಹನ ಪಾರ್ಕಿಂಗ್ ವಿಚಾರಕ್ಕೆ ವ್ಯಕ್ತಿ ಮೇಲೆ ಹಲ್ಲೆ
ಹುಬ್ಬಳ್ಳಿಯ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂತೋಷ್ ನಗರದಲ್ಲಿ ವಾಹನ ಪಾರ್ಕಿಂಗ್ ವಿಚಾರಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ಘಟನೆ  ನಡೆದಿದೆ.  ಕಾರಿನ ಪಕ್ಕ ಬೈಕ್ ನಿಲ್ಲಿಸಿದ ವಿಚಾರಕ್ಕೆ ಕೋಪಗೊಂಡು ಉಮೇಶ್ ಹಾಗೂ ಆತನ ಕುಟುಂಬಸ್ಥರು ವಿಜಯಲಕ್ಷ್ಮಿ ಮತ್ತು ಪತಿ ವಿಶ್ವರಾಧ್ಯ ಎಂಬ ದಂಪತಿಗಳ ಮೇಲೆ ಹಲ್ಲೆ ನಡೆಸಿದ್ದಾರೆಂದು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.