ಕಲಬುರಗಿ: ನಗರದಲ್ಲಿ ಮೊಬೈಲ್ ಪತ್ತೆ: ಸಂಚಾರಿ ಪೊಲೀಸರಿಂದ ಮಾನವೀಯ ನಡೆ
ಕಲಬುರಗಿ ನಗರದ ರೈಲ್ವೆ ನಿಲ್ದಾಣದ ಹತ್ತಿರ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಮೊಬೈಲ್ ಫೋನ್ನ್ನು ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಪತ್ತೆಹಚ್ಚಿ, ಅದನ್ನು ವಾರಸುದಾರರಿಗೆ ಹಿಂತಿರುಗಿಸಿದರು. ತಮ್ಮ ಕರ್ತವ್ಯದಲ್ಲಿಯೇ ಮಾನವೀಯತೆಯನ್ನು ಮೆರೆದ ಪೊಲೀಸ್ ಸಿಬ್ಬಂದಿಯ ನಡೆ ಸ್ಥಳೀಯರಿಂದ ಪ್ರಶಂಸೆಗೆ ಪಾತ್ರವಾಗಿದೆ. ಈ ಕುರಿತು ಸೋಮವಾರ 8 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ...