ಶಿವಮೊಗ್ಗ: ಝೀರೋ ಟ್ರಾಫಿಕ್ ನಲ್ಲಿ ಶಿವಮೊಗ್ಗದಿಂದ ಯುವಕ ಮಣಿಪಾಲ್ ಆಸ್ಪತ್ರೆ ಗೆ ಶಿಫ್ಟ್
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಯುವಕನನ್ನ ಝೀರೋ ಟ್ರಾಫಿಕ್ ನಲ್ಲಿ ಮಣಿಪಾಲ್ ಆಸ್ಪತ್ರೆ ಗೆ ಶಿಫ್ಟ್ ಮಾಡಲಾಯ್ತು. ತೀರ್ಥಹಳ್ಳಿ ತಾಲೂಕಿನ ಹುಂಚ ಹೋಬಳಿಯ ಶಂಕರಹಳ್ಳಿ ಗ್ರಾಮದ ಶ್ರೇಯಾಂಕ ಎಂಬ ಯುವಕ ಬಹು ಅಂಗಾಂಗ ವೈಫಲ್ಯ ದಿಂದ ಬಳಲುತ್ತಿದ್ದ ಹಿನ್ನೆಲೆ ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಯಿಂದ ಮಣಿಪಾಲ್ ಆಸ್ಪತ್ರೆ ಗೆ ಬುಧವಾರ ಮಧ್ಯಾಹ್ನ 1 ಗಂಟೆಗೆ ಶಿಫ್ಟ್ ಮಾಡಲಾಯಿತು. ಶ್ರೇಯಾಂಕ ನಿನ್ನೆ ಜ್ವರ ಬಂದ ಹಿನ್ನೆಲೆ ಆಸ್ಪತ್ರೆ ಗೆ ದಾಖಲಾಗಿದ್ದರು. ಈ ವೇಳೆ ಬಹು ಅಂಗಾಂಗ ವೈಫಲ್ಯ ಆಗಿರುವ ಕಂಡುಬಂದಿದೆ. ಈ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ದಿಂದ ಮಣಿಪಾಲ್ ಆಸ್ಪತ್ರೆ ಗೆ ಶಿಫ್ಟ್ ಮಾಡುವ ವೇಳೆ ಪೊಲೀಸರು ಝೀರೋ ಟ್ರಾಫಿಕ್ ನಲ್ಲಿ ಯುವಕನನ್ನ ಶಿಫ್ಟ್ ಮಾಡಿದರು.