ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ 42 ರ ರಾಜಾಜಿ ನಗರ, ಹೂಗಾರ ಓಣಿ, ಓಂಕಾರ ಕಿರಾಣಿ ಅಂಗಡಿಯ ಹತ್ತಿರ ಕಾಂಕ್ರೀಟ್ ರಸ್ತೆಯ ಕಾಮಗಾರಿಗಳು ಹಾಗೂ ಸಿದ್ದರಾಮ ನಗರ, ವೆಂಕಟೇಶ ಕಾಲನಿಯಲ್ಲಿ ತೆರೆದ ಚರಂಡಿಯ ಕಾಮಗಾರಿಗಳು ಮತ್ತು ಆಜಾದ್ ಸೊಸೈಟಿಯ ಹತ್ತಿರ ಒಳ ಚರಂಡಿ ಕಾಮಗಾರಿಗೆ ಶಾಸಕರಾದ ಮಹೇಶ್ ಟೆಂಗಿನಕಾಯಿ ಅವರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಎಮ್.ವೈ.ನರಗುಂದ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷರಾದ ರಾಜು ಕಾಳೆ, ಪ್ರಮುಖರಾದ ಅಶೋಕ ವಾಲ್ಮೀಕಿ, ರಮೇಶ ಮಹಾದೇವಪ್ಪನವರ, ಈಶ್ವರಗೌಡ ಪಾಟೀಲ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.