ಕಲಬುರಗಿ : ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್ಪಿನ್ ಆರ್ಡಿ ಪಾಟೀಲ್ ಸಧ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು.. ಕಲಬುರಗಿ ಸೆಂಟ್ರಲ್ ಜೈಲಿನಲ್ಲಿರೋ ಆರ್ಡಿ ಪಾಟೀಲ್ ಜೈಲು ಸಿಬ್ಬಂದಿಗಳ ಜೊತೆ ಕಿರಿಕ್ ಮಾಡಿರೋ ಘಟನೆ ನಡೆದಿದ್ದು, ಡಿಸೆಂಬರ್ 28 ರಂದು ಮಧ್ಯಾನ 1.30 ಕ್ಕೆ ಮಾಹಿತಿ ಲಭ್ಯವಾಗಿದೆ... ಎಂದಿನಂತೆ ಜೈಲಿನ ಸಿಬ್ಬಂದಿಗಳು ಬ್ಯಾರಕ್ ತಪಾಸಣೆ ಮಾಡೋವಾಗ, ನನ್ನ ಅನುಮತಿ ಇಲ್ಲದೇ ಬ್ಯಾರೇಕ್ ತಪಾಸಣೆ ಮಾಡೋಹಾಗಿಲ್ಲ ಅಂತಾ ಆರ್ಡಿ ಪಾಟೀಲ್ ಕಿರಿಕ್ ಮಾಡಿದ್ದಾರೆ. ಇನ್ನೂ ಆರ್ಡಿ ಪಾಟೀಲ್ರ ವಿರುದ್ಧ ಇದೀಗ ಜೈಲು ಅಧಿಕ್ಷಕಿ ಡಾ ಅನೀತಾ ಫರಹತ್ತಬಾದ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ..