ಅಫಜಲ್ಪುರ: ಚೌಡಯ್ಯ ಮೂರ್ತಿಗೆ ಅವಮಾನ: ಅಫಜಲಪುರದಲ್ಲಿ ಉಗ್ರ ಪ್ರತಿಭಟನೆ
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿಗೆ ಅವಮಾನ ಮಾಡಿದ ಘಟನೆಗೆ ವಿರೋಧವಾಗಿ ಚೌಡಾಪುರ ಹಾಗೂ ಅಫಜಲಪುರ ಪಟ್ಟಣಗಳಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಸುಧಾರಣಾ ಸಮಿತಿಯ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಅಪರಾಧಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಮಂಗಳವಾರ 4 ಗಂಟೆವರೆಗೆ ಪ್ರತಿಭಟನೆ ನಡೆಯಿತು..