ಬೆಂಗಳೂರು ದಕ್ಷಿಣ: ಜೆಪಿ ನಗರದಲ್ಲಿ ಕತ್ತುಕೂಯ್ದು ವ್ಯಕ್ತಿಯ ಕೊಲೆ, ಆರೋಪಿಗಳಿಗಾಗಿ ಪೊಲೀಸರು ಬಲೆ
ಜೆಪಿ ನಗರದ ಮೊದಲನೇ ಹಂತದಲ್ಲಿ ಕತ್ತುಕೊಯ್ದ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ, ಮೃತ ವ್ಯಕ್ತಿಯನ್ನ ಹಿಮಾಚಲ ಪ್ರದೇಶದ ತಿಲಕ್ ಕುಮಾರ್ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಪುಟ್ ಪಾತ್ ಬಳಿಯ ಮರದ ಕೆಳಗೆ ಕುಳಿತಿದ್ದ ರೀತಿಯಲ್ಲಿ ಶವ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಸ್ಥಳೀಯರು, ಬಳಿಕ ಜೆ ಪಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಕತ್ತುಕೊಯ್ದ ರೀತಿಯಲ್ಲಿ ಪತ್ತೆಯಾದ ಶವ. ಮೃತದೇಹ ಮತ್ತು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಸೊಕೋ ತಂಡ ಕೊಲೆ ಮಾಡಿರುವ ಶಂಕೆ ಮೇರೆಗೆ ಕೇಸ್ ದಾಖಲು ಮಾಡಿ, ಕೊಲೆ ಪ್ರಕರಣ ದಾಖಲಿಸಿಕೊಂಡ ಜೆ.ಪಿ ನಗರ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.