ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಇನ್ನೋವಾ ಕಾರು ಡಿಕ್ಕಿಯಾಗಿ 2 ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಚಿತ್ರದುರ್ಗದ ತಮಟಕಲ್ಲು ಬ್ರೀಡ್ಜ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇನ್ನೋವಾ ಚಾಲಕ ರಾಕೇಶ್ (40) ಕಮಲ್ ಹರಿಬಾಬ್ ಪಾಟೀಲ್ (65) ಮೃತಪಟ್ಟಿದ್ದಾರೆ. ಮೃತರು ಮಹಾರಾಷ್ಟ್ರದ ಕೊಲ್ಲಾಪುರ ಮೂಲದವರು ಎಂದು ತಿಳಿದು ಬಂದಿದೆ. ANF DYSP ವೈಷ್ಣವಿ ಪಾಟೀಲ್, ಚಿಕ್ಕಮ್ಮ ಕುಸುಮ, ಪೊಲೀಸ್ ಪೇದೆ ಉದಯ್ ಸಿಂಗ್ ಗಾಯಾಳುಗಳು. DYSP ವೈಷ್ಣವಿ ಪಾಟೀಲ್ ತಾಯಿ & ಚಿಕ್ಕಮ್ಮನ ಜೊತೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ಮಹಾರಾಷ್ಟ್ರಕ್ಕೆ ವಾಪಸ್ ತೆರಳುವ ಮಾರ್ಗ ಮಧ್ಯೆ ಅಪಘಾತ ನಡೆದಿದೆ. ಘಟನಾ ಸ್ಥಳಕ್ಕೆ DYSP ದಿನಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.