ಪಕ್ಷದ ವರಿಷ್ಟರ ತೀರ್ಮಾನದ ಬಳಿಕ ಡಿಕೆ ಶಿವಕುಮಾರ್ ಅವರು ಸಿಎಂ ಅಗಲಿದ್ದಾರೆ ಎಂದು ಶಾಸಕ ಕೆಎಂ ಉದಯ್ ಮದ್ದೂರಿನಲ್ಲಿ ತಿಳಿಸಿದರು. ಮದ್ದೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಿದ ಬಳಿಕ ಮಾತನಾಡಿದ ಕಾಂಗ್ರೆಸ್ ಶಾಸಕ ಕದಲೂರು ಉದಯ್ , ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ, ಆದರೆ ಯಾವಾಗ ಎಂಬುದು ಭವಿಷ್ಯ ಹೇಳುವ ವಿಷಯವಲ್ಲ ಎಂದು ತಿಳಿಸಿದರು. ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಈಗಾಗಲೇ ದೆಹಲಿಗೆ ತೆರಳಿದೆ. ಮುಖ್ಯಮಂತ್ರಿ ಬದಲಾವಣೆ ನಿರ್ಧಾರ ಪಕ್ಷದ ವರಿಷ್ಠರ ತೀರ್ಮಾನದ ಬಳಿಕವೇ ಅಂತಿಮಗೊಳ್ಳಲಿದೆ ಎಂದು ಶನಿವಾರ ಸಂಜೆ ನಾಲ್ಕು ಗಂಟೆಯಲ್ಲಿ ಉದಯ್ ಅವರು ಹೇಳಿದರು.