ಶಿವಮೊಗ್ಗ: ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಸಂವಿಧಾನ ಭಾರತದ್ದು: ಶಂಕರಘಟ್ಟದಲ್ಲಿ ಪ್ರೊ.ಶರತ್ ಅನಂತಮೂರ್ತಿ
ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವಾದ ಸಂವಿಧಾನವೆಂದರೆ ಭಾರತದ ಸಂವಿಧಾನ. ಬಹು ವೈವಿಧ್ಯಮಯವಾದ ಭಾರತ ದೇಶದಲ್ಲಿ ಎಲ್ಲರೂ ಒಗ್ಗೂಡಿ ಬಾಳಲು ಮತ್ತು ಸಾರ್ಥಕವಾಗಿ ಸಾಧನೆ ಮಾಡಲು ಭಾರತ ಸಂವಿಧಾನ ಮಾರ್ಗದರ್ಶನ ಮಾಡುತ್ತದೆ. ಇಂದು ಪ್ರಸ್ತಾವನೆ ಬೋಧಿಸುವದಷ್ಟೇ ಮಾತ್ರವಲ್ಲ ಅದರಂತೆ ಅನುಸರಿಸಬೇಕು. ಆಗ ಭಾರತ ದೇಶ ಸಮೃದ್ಧವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ, ಪ್ರೊ. ಶರತ್ ಅನಂತಮೂರ್ತಿ ಅವರು ಬುದುವಾರ ಶಂಕರಘಟ್ಟದಲ್ಲಿ 76ನೇ ಭಾರತದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಈ ರೀತಿ ಅಭಿಪ್ರಾಯಪಟ್ಟರು.