ಶಿರಸಿ: ಬೆಣ್ಣೆಹೊಳೆ ಸೇತುವೆ ಕಾಮಗಾರಿ ವೀಕ್ಷಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಅಸಮಧಾನ
ಶಿರಸಿ: ಶಿರಸಿ ಕುಮಟಾ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರಕಾರ ತಲೆ ಎತ್ತುವಂತಿಲ್ಲ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅಸಮಧಾನ ವ್ಯಕ್ತಪಡಿಸಿದರು. ಅವರು ತಾಲೂಕಿನ ರಾಗಿಹೊಸಳ್ಳಿ ಬಳಿಯ ಬೆಣ್ಣೆಹೊಳೆ ಸೇತುವೆಯ ಕಾಮಗಾರಿ ವೀಕ್ಷಿಸಿದ ವೇಳೆ, ಗುತ್ತಿಗೆ ಕಂಪನಿಯ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಶಿರಸಿ ಕುಮಟಾ ಹಾಗೂ ಶಿರಸಿ ಹಾವೇರಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗೆ ಜನರು ಕಷ್ಟ ಪಡುತ್ತಿದ್ದಾರೆ. ರಸ್ತೆ ಸಂಚಾರ ನಿರ್ಬಂಧಿಸಿಕೊಟ್ಟರೂ ಕೆಲಸ ಆಗಿಲ್ಲ. ಗುತ್ತಿಗೆ ಅವಧಿ ಮುಗಿದಿಲ್ಲವಾ? ಎಂದೂ ಕೇಳಿದರು. ಸಂಚಾರ ನಿರ್ಬಂಧಿಸಿದರೆ, ಜನರಿಗೆ ಸಂಚಾರಕ್ಕೆ ತೊಂದರೆ ಜನ ಏನು ಹಾರಿಕೊಂಡು ಹೋಗಬೇಕಾ? ಎಂದೂ ಕೇಳಿದರು.