ಹೊಸಕೋಟೆ: ಪಟ್ಟಣದ ಅಮಾನಿಕೆರೆ ಬಳಿ ಜಿಟಿಜಿಟಿ ಮಳೆಯಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋದ ಪಾಪಿ ತಾಯಿ
ಕೆರೆ ಏರಿ ಮೇಲೆ ನವಜಾತ ಶಿಶು ಪತ್ತೆ: ಜಿಟಿ ಜಿಟಿ ಮಳೆಗೆ ನಲುಗಿದ ಪುಟ್ಟಪಾಪು: ರಕ್ಷಣೆಕೆರೆ ಏರಿ ಮೇಲೆ ನವಜಾತ ಶಿಶು ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅಮಾನಿಕೆರೆ ಬಳಿ ನಡೆದಿದೆ. ಜಿಟಿ ಜಿಟಿ ಮಳೆ ನಡುವೆ ಪಾಪಿತಾಯಿ ನವಜಾತ ಶಿಶುವನ್ನ ಬಿಟ್ಟು ಹೋಗಿದ್ದಾಳೆ. ಕೆರೆ ಏರಿ ಬಳಿ ಬ್ಯಾಗ್ ನಲ್ಲಿ ನವಜಾತ ಶಿಶುವನ್ನಿಟ್ಟು ಎಸ್ಕೇಪ್ ಆಗಿದ್ದಾಳೆ. ಮಳೆ ಹನಿಗಳಿಂದ ಸಂಪೂರ್ಣ ನೆನೆದು ಅಳುತ್ತಿದ್ದ ಮಗುವಿನ ಶಬ್ದ ಕೇಳಿ ಸ್ಥಳಿಯರು ರಕ್ಷಿಸಿದ್ದಾರೆ. ಮೂರು ದಿನಗಳಿಂದಷ್ಟೇ ಜನಿಸಿರುವ ಗಂಡು ಮಗು. ಬ್ಯಾಗ್ ನಲ್ಲಿದ್ದ