ಯಡ್ರಾಮಿ: ಕಣಮೇಶ್ವರ ಗ್ರಾಮದಲ್ಲಿ ಮಾವನ ಕೊಂದು ಶವ ಬಚ್ಚಿಟ್ಟಿದ್ದ ಅಳಿಯನ ಹೆಡೆಮೂರಿ ಕಟ್ಟಿದ ಯಡ್ರಾಮಿ ಪೊಲೀಸರು
ಕಲಬುರಗಿ : ಹಣಕಾಸು ವಿಚಾರಕ್ಕೆ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಕಣಮೇಶ್ವರ ಗ್ರಾಮದಲ್ಲಿ ಸ್ವಂತ ಸೋದರ ಮಾವನನ್ನೆ ಹತ್ಯೆ ಮಾಡಿ ಮನೆಯ ಅಟ್ಟದಲ್ಲಿ ಶಬ ಬಚ್ಚಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲೆಯಾದ ಸೋದರಮಾವ ಶರಣಬಸವನ ಅಳಿಯ ಆರೋಪಿ ಅಜಯ್ನನ್ನ ಯಡ್ರಾಮಿ ಠಾಣೆ ಪೊಲೀಸರು ಬಂಧಿಸಿದ್ದಾರೆ.. ಅ11 ರಂದು ಮಧ್ಯಾನ 12.30 ಕ್ಕೆ ಈ ಬಗ್ಗೆ ಪಬ್ಲಿಕ್ ಆ್ಯಪ್ಗೆ ಮಾಹಿತಿ ಲಭ್ಯವಾಗಿದೆ.. ಸೋದರ ಮಾವನನ್ನ ಹಣಕಾಸು ವಿಚಾರಕ್ಕೆ ಕೊಲೆ ಮಾಡಿ ಬಳಿಕ ಶವದ ವಾಸನೆ ಬರಬಾರದೆಂದು ಶವಕ್ಕೆ ಉಪ್ಪು ಹಚ್ಚಿ ಬಳಿಕ ಶವವನ್ನ ಮನೆಯಲ್ಲಿನ ಅಟ್ಟದ ಮೇಲೆ ಬಚ್ಚಿಟ್ಟು ಪರಾರಿಯಾಗಿದ್ದನು. ಬಳಿಕ ಮನೆಯವರಿಗೆ ವಿಷಯ ಹೇಳಿದ್ದ ಅಜಯ್ನನ್ನ ಯಡ್ರಾಮಿ ಪೊಲೀಸರು ಬಂಧಿಸಿದ್ದಾರೆ.