ಸರ್ಕಾರ ಪರಿಹಾರ ಕೊಡುವದಾದರೆ ಹೆಚ್ಚಿಗೆ ಕೊಡಲಿ : ನಗರದಲ್ಲಿ ವಿಠಲ್ ಯರಗಲ್ ಮನವಿ
2014 ರಿಂದಲೂ ಪ್ರವಾಹ ಬರುತ್ತಲೆ ಇದೆ. ಇನ್ನೂ 2020 ಕ್ಕಂತು ಇನ್ನೂ ಹೆಚ್ಚಿಗೆ ಬಂದಿತ್ತು, 2007 ರಲ್ಲಿ 77 ಮನೆಗಳು ದೇವಣಗಾಂವ ದಲ್ಲಿ ಸರ್ವೆಮಾಡಿ ಹಂಚಿಕೆ ಮಾಡಿದ್ದಾರೆ. ಇನ್ನೂ ಹಲವರಿಗೆ ಮನೆ ಕೊಡಬೇಕಿದೆ. ಪ್ರವಾಹದಿಂದ ಕಬ್ಬು, ತೊಗರಿ ಸೇರಿದಂತೆ ಎಲ್ಲವೂ ಹಾನಿಯಾಗಿದೆ. ಸರ್ಕಾರ ಐದತ್ತು ಸಾವಿರ ಪರಿಹಾರ ಕೊಟ್ಟರೆ ಯಾವುದೇ ಪ್ರಯೋಜನವಾಗಲ್ಲ, ಇಷ್ಟು ಪರಿಹಾರ ಕೊಡುವದಾದರೆ ನೀವು ಪರಿಹಾರ ಕೊಡುವದೇ ಬೇಡಾ ಎಂದು ವಿಠಲ ಶಂಕರ್ ಯರಗಲ್ ಹೇಳಿದರು..