ಹೊಳಲ್ಕೆರೆ: ತಾಲ್ಲೂಕಿನ ಕೊಳಾಲ್ ಶ್ರೀಕೆಂಚವದೂತ ಸ್ವಾಮಿ ದೇವಾಲಯಕ್ಕೆ ಸಚಿವ ಡಿ.ಸುಧಾಕರ್ ಭೇಟಿ
ತಾಲ್ಲೂಕಿನ ಕೊಳಾಳ್ ಗ್ರಾಮದ ಶ್ರೀ ಕೆಂಚಾವದೂತ ಸುಕ್ಷೇತ್ರ ದೇವಾಲಯಕ್ಕೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಚಿವರು ಗ್ರಾಮದ ಶ್ರೀ ಕೆಂಚಾವದೂತ ಸುಕ್ಷೇತ್ರ ದೇವಾಲಯದ ಸಮುದಾಯ ಭವನ ನಿರ್ಮಾಣಕ್ಕಾಗಿ (ಕಲ್ಯಾಣ ಮಾರ್ಗಸೂಚಿಯ ಅನ್ವಯ) ₹50 ಲಕ್ಷ ಅನುದಾನವನ್ನು 2025-26ನೇ ಸಾಲಿನ ಯೋಜನೆಯಲ್ಲಿ ಹಂಚಿಕೆ ಮಾಡಿದ ಆದೇಶ ಪ್ರತಿಯನ್ನು ಸ್ವಾಮಿಗಳಿಗೆ ಹಸ್ತಾಂತರಿಸಿದರು.ಸ್ಥಳೀಯ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಅವುಗಳನ್ನು ಶೀಘ್ರದಲ್ಲೇ ಪರಿಹರಿಸುವ ಭರವಸೆ ನೀಡಿದರು.