ಧಾರವಾಡ: ನಮ್ಮ ಮಗನ ಆತ್ಮಹತ್ಯೆಗೆ ಫೈನಾನ್ಸ್ ಸಿಬ್ಬಂದಿ ಪ್ರಚೋದನೆ ನೀಡಿದ್ದಾರೆ : ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಪೋಷಕರ ಆರೋಪ
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಮಲ್ಲಿಕಾರ್ಜುನ ಶಿರಗುಪ್ಪಿ ಸ್ಕೂಟಿ ಖರೀದಿಗೆ ಸಾಲ ಮಾಡಿಕೊಂಡಿದ್ದ. ಪ್ರತಿ ತಿಂಗಳು ಸರಿಯಾಗಿ ಕಂತು ಕಟ್ಟುತ್ತಲೆ ಬಂದಿದ್ದ ಮಲ್ಲಿಕಾರ್ಜುನ ಗೆ ಕಳೆದ ಎರಡು ತಿಂಗಳ ಹಿಂದೆ ಕಿಡ್ನಿ ಸ್ಟೋನ್ ಶಾಸ್ತ್ರ ಚಿಕಿತ್ಸೆಯಾಗಿ ಕಂತು ಕಟ್ಟಲು ಆಗಿರಲಿಲ್ಲ. ಫೈನಾನ್ಸ್ ಸಿಬ್ಬಂದಿಗಳು ಆತನಿಗೆ ಕರೆ ಮಾಡಿ ಕಂತು ಕಟ್ಟುವಂತೆ ಒತ್ತಡ ಹೇರಿ. ನೇಣು ಹಾಕಿಕೊಳ್ಳುವುದಾದರೆ ನಮ್ಮ ಮ್ಯಾನೇಜರ್ ಹೆಸರು ಬರೆದಿಟ್ಟು ಸಾಯಿ ಅಂತ ಪ್ರಚೋದನೆ ನೀಡಿದ್ದಾರೆ ಇದರಿಂದ ಮಲ್ಲಿಕಾರ್ಜುನ್ ವಿಡಿಯೋ ಕಾಲ್ ಮಾಡಿ ನೋಡಿ ನೇಣ ಹಾಕಿಕೊಳ್ಳುತ್ತಿದ್ದೇನೆ ಎಂದಿದ್ದಾನೆ ಎಂದು ಆತನ ಸಾವಿಗೆ ಫೈನಾನ್ಸ್ ಸಿಬ್ಬಂದಿಗಳ ಕಾರಣ ಎಂದು ಆತ್ಮಹತ್ಯೆ ಮಾಡಿಕೊಂಡ ಯುವಕನ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.