ಹೊಸದುರ್ಗ ತಾಲ್ಲೂಕಿನ ಅತ್ತಿಘಟ್ಡ ಮರ್ಡರ್ ಕೇಸ್ ಸಂಬಂಧ ಚಿತ್ರದುರ್ಗದಲ್ಲಿ ಎಸ್ಪಿ ರಂಜಿತ್ ಕುಮಾರ್ ಬಂಡಾರೂ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು ಮದುವೆ ವಿಚಾರಕ್ಕೆ ತಂದೆ& ಮಗನ ನಡುವೆ ಗಲಾಟೆಯಾಗಿದೆ. ಈ ವೇಳೆ ಕಬ್ಬಿಣದ ರಾಡ್ ನಿಂದ ಹೊಡೆದು ತಂದೆಯನ್ನ ಕೊಲೆ ಮಾಡಿದ್ದಾನೆ ಎಂದು ಎಸ್ಪಿ ರಂಜಿತ್ ಕುಮಾರ್ ತಿಳಿಸಿದ್ದಾರೆ. ಇನ್ನೂ ಘಟನೆಯಲ್ಲಿ ಸಣ್ಣ ನಿಂಗಪ್ಪ (35) ಮೃತ ಪಟ್ಟಿದ್ದು, ಆರೋಪಿಯನ್ನ ನಿಂಗರಾಜ್ ಎಂದು ಗುರುತಿಸಲಾಗಿದೆ. ನಿತ್ಯ ಮನೆಯಲ್ಲಿ ತಂದೆ- ಮಗನ ನಡುವೆ ಗಲಾಟೆ ನಡೆಯುತ್ತಿತ್ತು, ಆದರೆ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಆರೋಪಿ ನಿಂಗರಾಜ್ ವಶಕ್ಕೆ ಪಡೆದು ಹೊಸದುರ್ಗ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದರು.