ಹೊನ್ನಾವರ: ಗಣೇಶ ಚತುರ್ಥಿ ನಿಮಿತ್ತ ಇಡಗುಂಜಿ ಗಣಪನ ದರ್ಶನ ಪಡೆದ ಸಚಿವ ಮಂಕಾಳ ವೈದ್ಯ
ಹೊನ್ನಾವರ: ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಚಿವರಾದ ಮಂಕಾಳ ವೈದ್ಯ ತಮ್ಮ ಪುತ್ರಿ ಬೀನಾ ಅವರೊಂದಿಗೆ ಮಧ್ಯಾಹ್ನ ಇಡಗುಂಜಿ ಶ್ರೀ ಗಣಪತಿ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ಅಲ್ಲದೇ ವಿಶೇಷವಾಗಿ ಪ್ರಾರ್ಥಿಸಿಕೊಂಡರು. ಕ್ಷೇತ್ರ ಮತ್ತು ರಾಜ್ಯದ ಜನತೆಗೆ ಶ್ರೀ ಗಣಪ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಿದರು.