ಕುಂದಗೋಳ: ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ ಲಿ., ಧಾರವಾಡ- 110ನೇ ಸಂಸ್ಥಾಪನ ದಿನಾಚರಣೆ ಅಂಗವಾಗಿ ಇಂದು ಕುಂದಗೋಳದಲ್ಲಿ “NABARD ಸಹಯೋಗದೊಂದಿಗೆ ಕರ್ನಾಟಕ ಸೆಂಟ್ರಲ್ ಕೋ-ಆಪ್ ಬ್ಯಾಂಕ್, ಧಾರವಾಡ ಆಯೋಜಿಸಿದ್ದ ಆರ್ಥಿಕ ಸಾಕ್ಷರತಾ ಯೋಜನೆಯಡಿಯಲ್ಲಿ "ಬ್ಯಾಂಕಿನ ಆರ್ಥಿಕ ಹಾಗೂ ಡಿಜಿಟಲ್ ಸೇವಾ ಸೌಲಭ್ಯಗಳ ತಿಳುವಳಿಕೆ ಕಾರ್ಯಾಗಾರ"ವನ್ನು ಶಾಸಕರಾದ ಎಂ.ಆರ್.ಪಾಟೀಲ್ ಅವರು ಉದ್ಘಾಟಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೆ.ಸಿ.ಸಿ ಬ್ಯಾಂಕ ನಿರ್ದೇಶಕರಾದ ಉಮೇಶ ಹೆಬಸೂರ, ಮಾಲತೇಶ ಶ್ಯಾಗೋಟಿ, ನಾಗರಾಜ ದೇಶಪಾಂಡೆ ಹಾಗೂ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.