ಚಿಂತಾಮಣಿ: ಕಾವಲಗಾನಹಳ್ಳಿ ಗ್ರಾಮದಲ್ಲಿ ಮನೆ ಖಾಲಿ ಮಾಡುವ ವಿಚಾರಕ್ಕೆ ವೃದ್ಧ ದಂಪತಿ ಮೇಲೆ ಹಲ್ಲೆ
ಮನೆ ಖಾಲಿ ಮಾಡುವ ವಿಚಾರಕ್ಕಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ವೃದ್ಧ ದಂಪತಿಗಳ ಮಚ್ಚಿನಿಂದ ಕತ್ತರಿಸಿ ಮರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಲಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.ಕಳೆದ ಕೆಲ ದಿನಗಳಿಂದ ವೆಂಕಟಮ್ಮ ಮತ್ತು ಆದಪ್ಪ ಕುಟುಂಬಗಳ ನಡುವೆ ಮನೆ ಖಾಲಿ ಮಾಡುವ ವಿಚಾರಕ್ಕೆ ಗಲಾಟೆಗಳು ನಡೆಯುತ್ತಿದ್ದು. ಇಂದು ಏಕಾಏಕಿ ಆದಪ್ಪ ಕುಟುಂಬದವರು ಮಚ್ಚು ಕಲ್ಲುಗಳಿಂದ ವೆಂಕಟಮ್ಮ ಅವರ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.