ಕುರುಗೊಡು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೋಲೀಸರ ದಾಳಿ 37 ಜನರ ಮೇಲೆ ಪ್ರಕರಣ ದಾಖಲು
ಕುರುಗೋಡು ತಾಲ್ಲೂಕಿನ ಕ್ಯಾದಿಗೇಹಾಳು ಗ್ರಾಮದ ಎರಡು ಕಡೆ. ಎಚ್ ವೀರಾಪುರದಲ್ಲಿ ಎರಡು ಕಡೆ ಹಾಗೂ ಬಸಾಪುರ ಗ್ರಾಮದ ಒಂದು ಕಡೆ ಕುರುಗೋಡು ಸಿಪಿಐ ವಿಶ್ವನಾಥ ಹಿರೇಗೌಡ ಹಾಗೂ ಪಿಎಸ್ಐ ಸುಪ್ರೀತ್ ವಿರುಪಾಕ್ಷಪ್ಪ ಮತ್ತವರ ತಂಡ ತಮಗೆ ತಿಳಿದು ಬಂದ ಖಚಿತ ಮಾಹಿತಿ ಮೇರೆಗೆ ಸೋಮವಾರ ರಾತ್ರಿ11ಗಂಟೆಗೆ ದಾಳಿ ನಡೆಸಿ 37 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೋಲಿಸರು ಮಂಗಳವಾರ ಬೆಳಿಗ್ಗೆ 10ಗಂಟೆಗೆ ಮಾಹಿತಿ ನೀಡಿದ್ದಾರೆ. ಹಬ್ಬ ಎಂದು ಇಸ್ಪೀಟ್ ಆಡಿದರೆ ಕಠಿಣ ಕ್ರಮ ಪೋಲೀಸ್ ಇಲಾಖೆ ಸೂಚನೆ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇಸ್ಪೀಟ್ ಆಟ ಆಡಿದರೆ ಅಂತವರ ವಿರುದ್ಧ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಳೆದೆರಡು ದಿನಗಳಿಂದ ಪೋಲೀಸ್ ಠಾಣೆ ವತಿಯಿಂದ ಧ್ವನಿ ವರ್ಧಕ ಬಳಸಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ವಿವಿಧ ಗ