ಹುಮ್ನಾಬಾದ್: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹೃದಯಘಾತದಿಂದ ಅಪರಿಚಿತ ವ್ಯಕ್ತಿ ಸಾವು ಪತ್ತೆಗಾಗಿ ಪೊಲೀಸರ ಮನವಿ
ವಿಪರಿತ ಚಳಿ ತಾಳಲಾಗದೆ ಅಪರಿಚಿತ ವ್ಯಕ್ತಿಯೊಬ್ಬರು ಹೃದಯಘಾತದಿಂದ ಮೃತಪಟ್ಟಿರುವ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದ್ದು ಚಿತ್ರದಲ್ಲಿರುವ ವ್ಯಕ್ತಿಯನ್ನು ಪತ್ತೆಹಚ್ಚುವಂತೆ ಪೊಲೀಸರು ಮಂಗಳವಾರ ಸಂಜೆ 5ಕ್ಕೆ ಈ ಮೂಲಕ ಮನವಿ ಮಾಡಿದ್ದಾರೆ. ಮೃತವ್ಯಕ್ತಿ 45-50 ವರ್ಷದವರಾಗಿದ್ದು ಕಪ್ಪು ಬಣ್ಣದ ಜಾಕೆಟ್ ನೀಲಿ ಬಣ್ಣದ ಶರ್ಟ್ ಬೂದಿ ಬಣ್ಣದ ಪ್ಯಾಂಟ್ ಧರಿಸಿ ದ್ದಾರೆ. 9480803422, 9480803435, 9480803452 ತಿಳಿಸಲು ಕೋರಿದ್ದಾರೆ.