ಯಲ್ಲಾಪುರ :ಚಂದಗುಳಿ ಗಂಟೆ ಗಣೇಶ ದೇವಸ್ಥಾನದಲ್ಲಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ ಚಂದಗುಳಿ ವತಿಯಿಂದ ಮಕರ ಸಂಕ್ರಾAತಿ ಉತ್ಸವವನ್ನು ಜ.೧೪ ರಂದು ಆಚರಿಸಲಾಗುವುದು. ಸಮಿತಿ ಯವರು ತಿಳಿಸಿದ್ದಾರೆ.ಬೆಳಿಗ್ಗೆ ೧೦.೩೦ ರಿಂದ ಉಪನಿಷತ್ ಪಾರಾಯಣ, ಅಭಿಷೇಕ, ಮಹಾಪೂಜೆ, ಮಂಗಳಾರತಿ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯುವುದು. ರಾತ್ರಿ ೧೦ ರಿಂದ ಪ್ರಸಿದ್ಧ ಕಲಾವಿದರಿಂದ ನಡೆಯುವ "ಸೀತಾಪಹಾರ ಮತ್ತು ಸುಧನ್ವಾರ್ಜುನ" ಯಕ್ಷಗಾನ ತಾಳಮದ್ದಲೆ ನಡೆಯಲಿದೆ.