ಕಲಬುರಗಿ: ನಿರಾಶ್ರಿತರಿಗೆ ನಿಸ್ವಾರ್ಥ ಸೇವೆ: ನಗರದಲ್ಲಿ 155 ಮಂದಿಗೆ ಉಚಿತ ಕ್ಷೌರ
ಕಲಬುರಗಿ ಜಿಲ್ಲೆಯ ಬಿದ್ದಾಪೂರ ಕಾಲೋನಿಯ ನಿರಾಶ್ರಿತರ ಕೇಂದ್ರದಲ್ಲಿ 155 ಕ್ಕೂ ಹೆಚ್ಚು ನಿರ್ಗತಿಕರಿಗೆ ಉಚಿತ ಕ್ಷೌರ ಸೇವೆ ಸಲ್ಲಿಸುವ ಮೂಲಕ ಸಮಾಜ ಸೇವಕ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್ ಅವರು ಮತ್ತೊಮ್ಮೆ ಮಾನವೀಯ ಸೇವೆಯ ಮಾದರಿ ನಿರ್ಮಿಸಿದ್ದಾರೆ. ಇದುವರೆಗೆ 15 ಕಡೆಗಳಲ್ಲಿ ಒಟ್ಟು 1650 ಕ್ಕೂ ಹೆಚ್ಚು ಅನಾಥರು, ನಿರ್ಗತಿಕರು, ಅಂಗವಿಕಲರು, ಹಿರಿಯರು, ಪೌರ ಕಾರ್ಮಿಕರು ಸೇರಿದಂತೆ ಹಲವರಿಗೆ ಉಚಿತ ಸೇವೆ ನೀಡರುವ ಇವರ ನಿಸ್ವಾರ್ಥ ಸೇವೆಗೆ ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಈ ಸೇವೆಯಲ್ಲಿ ಹಡಪದ ಅಪ್ಪಣ್ಣ ಸಮಾಜದ ಹಲವು ಮುಖಂಡರು ಭಾಗವಹಿಸಿ ಸಮಾಜ ಸೇವೆಯ ಮಹತ್ವವನ್ನು ಹಂಚಿಕೊಂಡರು ಎಂದು ಬುಧವಾರ 8 ಗಂಟೆಗೆ ಮಾಹಿತಿ ಲಭ್ಯವಾಗಿದೆ...