ಕೃಷ್ಣರಾಜನಗರ: ನನ್ನನ್ನು ಶಾಸಕರಾಗಿ ಮಾಡಲು ಹೆಚ್ಚು ಶ್ರಮ ವಹಿಸಿದ ಒಕ್ಕಲಿಗ ಸಮಾಜಕ್ಕೆ ಕೃತಜ್ಞತೆ: ಪಟ್ಟಣದಲ್ಲಿ ಶಾಸಕ ಡಿ. ರವಿಶಂಕರ್
ನನ್ನ ಗೆಲುವಿಗೆ ಹೆಚ್ಚು ಶ್ರಮ ವಹಿಸಿದ ಒಕ್ಕಲಿಗ ಸಮಾಜದ ಮುಖಂಡರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಎಂದು ಶಾಸಕ ಡಿ. ರವಿಶಂಕರ್ ಹೇಳಿಕೆ ನೀಡಿದರು. ಪಟ್ಟಣದಲ್ಲಿ ಒಕ್ಕಲಿಗ ಮುಖಂಡರೊಂದಿಗೆ ಸಭೆಯಲ್ಲಿ ಕೃತಜ್ಞತೆ ತಿಳಿಸಿದ ಬಳಿಕ ಮಾತನಾಡಿದ ಶಾಸಕರು, ಸಮಾಜದ ಅಭಿವೃದ್ಧಿಗೆ ಮತ್ತು ಸರ್ಕಾರದ ಕೆಲಸ ಸೇರಿದಂತೆ ನಿಮ್ಮ ರಾಜಕೀಯ ಬೆಳವಣಿಗೆಗೆ ಹೆಚ್ಚು ಸಹಕಾರವನ್ನು ನೀಡಿ ನಿಮ್ಮನ್ನು ಬೆಳೆಸಿಕೊಳ್ಳುತ್ತೇನೆ ಎಂದು ಇದೇ ವೇಳೆ ತಿಳಿಸಿದರು.