ಚಿತ್ರದುರ್ಗ: ಚಿತ್ರದುರ್ಗದಲ್ಲಿ ಸೌಹಾರ್ದ ಭಾರತ ಪುಸ್ತಕ ಲೋಕಾರ್ಪಣೆ
ಭಾರತದಲ್ಲಿ ದ್ವೇಷ ತೊರೆದು, ಸೌಹಾರ್ದತೆ ಸಾರಿದ ವ್ಯಕ್ತಿತ್ವಗಳ ಎಲ್ಲ ವಿಚಾರಗಳನ್ನೂ “ಸೌಹಾರ್ದ ಭಾರತ” ಕೃತಿಯಲ್ಲಿ ಕಾಣಬಹುದಾಗಿದ್ದು, ಜನಮಾನಸಕ್ಕೆ ತಲುಪುವುದೇ ಕೃತಿಯ ಆಶಯವಾಗಿದೆ ಎಂದು ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ ಹೇಳಿದರು. ನಗರದ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ, ನಾಡು ನುಡಿ ಬಳಗ, ಅಂಬೇಡ್ಕರ್ ವಿಚಾರ ವೇದಿಕೆ, ಮೈತ್ರಿ ಪುಸ್ತಕ ಮನೆ ಸಹಯೋಗದೊಂದಿಗೆ ನಾಡೋಜ ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಕೃತಿಯ ಜನಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ವೇಳೆ ಎಡಿಸಿ ಬಿ.ಟಿ. ಕುಮಾರ್ ಸ್ವಾಮಿ ಸೇರಿ ಹಲವರಿದ್ದರು