ಸಿಂದಗಿ: ಸಿಂದಗಿ:ತಾಲೂಕಿನ ಯಂಕಂಚಿ, ಮನ್ನಾಪೂರ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ನೀರಾವರಿ ಪಂಪಸೆಟ್ಟಗಳಿಗೆ ಎ.1 ರಿಂದ ಎ.3ರವರೆಗೆ ವಿದ್ಯುತ್ ವ್ಯತ್ಯಯ
ಸಿಂದಗಿ ಪಟ್ಟಣದಲ್ಲಿನ 110/11 ಕೆವ್ಹಿ ವಿದ್ಯುತ್ ಕೇಂದ್ರ ಸಿಂದಗಿಯಲ್ಲಿ ಪರಿವರ್ತಕ ಬದಲಾವಣೆ ಮಾಡುವ ಹಿನ್ನಲೆಯಲ್ಲಿ ಎಪ್ರೀಲ್ 1 ರಿಂದ 3ರವರೆಗೆ ಯಂಕಂಚಿ, ಮನ್ನಾಪೂರ, ಸಿಂದಗಿ ನಗರದ ಅಕ್ಕ ಪಕ್ಕದ ಅಡವಿ ವಸ್ತಿ,ಸೋಪೂರ, ಬಂದಾಳ, ಚಿಕ್ಕಸಿಂದಗಿ, ಬ್ಯಾಕೋಡ, ಯರಗಲ್, ಮಾಡಬಾಳ ಮತ್ತು ಅಂತರಗಂಗಿ ಗ್ರಾಮಗಳ ನೀರಾವರಿ ಪಂಪಸೆಟ್ಟಗಳಿಗೆ ಅನಿರ್ಧಿಷ್ಟವಾಗಿ ದಿನಕ್ಕೆ ಎರಡು ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡಿದ ಉಳಿದ ಸಮಯ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಉಪವಿಭಾಗ ಸಿಂದಗಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಟ್ಟಣದಲ್ಲಿ ರವಿವಾರ ಸಂಜೆ 5 ಗಂಟೆಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.