ಚಳ್ಳಕೆರೆ: ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆ
ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಬುಧವಾರ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 45 ವರ್ಷದ ವ್ಯಕ್ತಿಯ ಮೃತದೇಹ ಪಟ್ಟಿದ್ದು, ವ್ಯಕ್ತಿಯ ಹೆಸರು, ಗುರುತು ಪತ್ತೆಯಾಗಿಲ್ಲ, ವ್ಯಕ್ತಿಯು ನೀಲಿ ಟೀ ಶರ್ಟ್, ಫ್ಯಾಂಟ್ ಅರ್ಧಕ್ಕೆ ಬಿಚ್ಚಿರುವ ರೀತಿಯಲ್ಲಿ ಇದ್ದು, ಬಿಳಿ ಗಡ್ಡಕ್ಕೆ ಕೆಂಪು ಬಳಿದಿದ್ದಾರೆ. ಘಟನ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.