ಸರಗೂರು: ಹಾಲುಗಡದಿಂದ ಇಟ್ನಾ ಗ್ರಾಮಕ್ಕೆ ಬಂದ ಚಿಕ್ಕದೇವಮ್ಮನ ಉತ್ಸವ: ಇಟ್ನಾ ಗ್ರಾಮಸ್ಥರಿಂದ ದೇವಿಗೆ ಸ್ವಾಗತ
ಬುಧವಾರ ಬೆಳಗ್ಗೆ ಇಟ್ನಾ ಗ್ರಾಮಕ್ಕೆ ಬಂದ ಚಿಕ್ಕದೇವಮ್ಮನ ಉತ್ಸವ ಮೂರ್ತಿಯನ್ನು ಪೂಜಿಸಲಾಯಿತು. ರಾತ್ರಿ 8 ಗಂಟೆ ಸಮಯದಲ್ಲಿ ಅಮ್ಮನವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ಭಕ್ತರು ತಮಟೆ ಮತ್ತು ವಾದ್ಯದ ಸದ್ದಿಗೆ ಕುಣಿದು ಕುಪ್ಪಳಿಸಿದರು. ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತಾಯಿ ಚಿಕ್ಕದೇವಮ್ಮನ ದರ್ಶನ ಪಡೆದು ಪುನೀತರಾದರು. ತಾಯಿ ಚಿಕ್ಕದೇವಮ್ಮ ದರ್ಶನಕ್ಕೆ ಚಿಕ್ಕದೇವಮ್ಮ ಸೇವಾ ಅಭಿವೃದ್ಧಿ, ಹಾಲುಗಡ ಜಾತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ಅನುಕೂಲ ಮಾಡಲಾಗಿತ್ತು.