ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ ಸಂಖ್ಯೆ 10ರ ಬಸವ ನಗರದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಅರವಿಂದ್ ಬೆಲ್ಲದ್ ಅವರು ಪಾಲ್ಗೊಂಡು, ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀಮತಿ ಚಂದ್ರಕಲಾ ಕೊಟಬಾಗಿ, ಮುಖಂಡರಾದ ಬಸವರಾಜ ಗರಗ, ಶಾಂತೇಶ್ ಚಿಕ್ಕಲಕಿ, ಶಿವು ಹಲಗಿ, ಶಂಕರ್ ಕೊಟ್ರಿ, ಈರಣ್ಣ ಚಿಕ್ಕಬೆಳ್ಳಿಗಟ್ಟಿ, ಸಂತೋಷ ಎಸ್ ಎಂ, ರವಿಕಿರಣ ವಾಗಮೋರೆ, ಸಂಜಯ್ ಸಾಲಿಮಠ, ವಿಜೇತ್ ಚಿಕ್ಕಲಕ್ಕಿ ಸೇರಿದಂತೆ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.