ಯಲ್ಲಾಪುರ: ತಾಲೂಕಾ ಮಟ್ಟದ ಯುವ ಸಂಸತ್ತಸ್ಪರ್ಧೆ,ಬಿಸಗೋಡ ಹೈಸ್ಕೂಲ್ ಪ್ರಥಮ
ಯಲ್ಲಾಪುರ, ಪಟ್ಟಣದ ತಾಲೂಕಾ ಪಂಚಾಯತ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕಾ ಮಟ್ಟದ ಯುವ ಸಂಸತ್ತ ಸ್ಪರ್ಧೆ ಕಾರ್ಯಕ್ರಮದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಶಾಸಕರು ವಿಧಾನಸಭೆಯ ಕಾರ್ಯಾಚರಣೆ ವೈಖರಿಯನ್ನು ವಿದ್ಯಾರ್ಥಿಗಳಿಗೆ ವಿಸ್ತೃತವಾಗಿ ವಿವರಿಸಿದರು. ಸರ್ಕಾರಿ ಪ್ರೌಢಶಾಲೆ ಬಿಸಗೋಡು ಪ್ರಣವ ಗಣಪತಿ ಭಟ್ ಪ್ರಥಮ, ಮಂಚಿಕೇರಿ ಶ್ರೀ ರಾಜರಾಜೇಶ್ವರಿ ಪ್ರೌಢಶಾಲೆ ಪನ್ನಗ ಕೃಷ್ಣಮೂರ್ತಿ ಶಾಸ್ತ್ರಿ ದ್ವಿತೀಯ ಸ್ಥಾನ ಪಡೆದಿದ್ದಾರೆ.