ಹುಬ್ಬಳ್ಳಿ,:ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯಿಂದ ಮತ್ತು ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ದುಂಡು ಮೇಜಿನ ಸಮ್ಮೇಳನವನ್ನು ಅಕ್ಟೋಬರ್ ೧೯ ರಂದು ಬೆ. ೧೦.೩೦ ಕ್ಕೆ ಧಾರವಾಡದ ಪುರೋಹಿತನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಮುಖಂಡರಾದ ಮಂಜುನಾಥ ಕೊಂಡಪಲ್ಲಿ ಹೇಳಿದರು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಮುಂದೇನು? ವಿಷಯದಡಿ ವಕೀಲರು ಮಂಡನೆ ಮಾಡಲಿದ್ದಾರೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಕೀಲರಾದ ಎಂ. ಆರ್. ಸುರೇಂದ್ರಕುಮಾರ್, ಮಾಳಪ್ಪ ಕುರ್ಕಿ, ಶಿವಕುಮಾರ್ ಬೆಳ್ತೂರ್ ಮಾದಿಗ ಸಮಾಜದ ಧಾರವಾಡ ಜಿಲ್ಲಾಧ್ಯಕ್ಷರಾದ ಪ್ರಭಾಕರ್ ಕುಸಗೂರ, ಆಗಮಿಸಲಿದ್ದಾರೆಂದರು