ಕೇಂದ್ರ ಸರಕಾರ ಒಡೆದು ಆಳುವ ನೀತಿ ಮಾಡುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದರು. ಗೋಡ್ಸೆಯನ್ನು ಪೂಜೆ ಮಾಡುವ ಬಿಜೆಪಿ ಅವರಿಂದ ಏನು ಸಿಗುತ್ತದೆ ಎಂದು ಪ್ರಶ್ನಿಸಿದ್ದರು ಮಹಾತ್ಮ ಗಾಂಧಿ ನರೇಗಾ ಹೆಸರು ಬದಲಾವಣೆ ಮಾಡುವ ಕೇಂದ್ರದ ನಿರ್ಧಾರದ ವಿರುದ್ಧ ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ ಎಂದು ಹೇಳಿದರು ಬುಧವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ದೇಶದಲ್ಲಿ ಬಿಜೆಪಿ ಒಡೆದು ಆಳುವ ನೀತಿ ಮಾಡುತ್ತಿದೆ. ಇದು ಬ್ರಿಟಿಷ್ ಆಡಳಿತದಂತೆ ಎಂದು ಆರೋಪಿಸಿದರು.