ಮಧುಗಿರಿ: ದೊಡ್ಡೇರಿಯಲ್ಲಿ ಶ್ರೀ ಹೊನ್ನೇಶ್ವರಸ್ವಾಮಿ ದಸರಾ ಕಾರ್ಯಕ್ರಮ
ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಶ್ರೀ ಹೊನ್ನೇಶ್ವರ ಸ್ವಾಮಿ ಜೀರ್ಣೋದ್ಧಾರ ಟ್ರಸ್ಟ್ ವತಿಯಿಂದ ಮೂರು ದಿನಗಳ ಕಾಲ ದಸರಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಜೆ ತಿಳಿಸಿದ್ದಾರೆ. ಪಟ್ಟಣದ ಕುಂಚಿಟಿಗರ ಸಂಘದಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಭಕ್ತಾದಿಗಳು ಗೊಂದಲಕ್ಕೀಡಾಗದೆ ಟ್ರಸ್ಟ್ ವತಿಯಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಬಿ.ವಿ. ಶಿವರಾಜು, ಕೆ.ಶ್ರೀಧರ್, ಕೆ.ಮಂಜುನಾಥ್, ಕರಿಯಣ್ಣ, ಬಿ. ಶಿವರಾಮು, ಜಗದೀಶ್ ಬಾಬು, ಹೆಚ್.ಎಸ್. ದೀಪಕ್ ಹೊನ್ನಾಪುರ ಹಾಗೂ ಇತರರು ಉಪಸ್ಥಿತರಿದ್ದರು...