ಸಿದ್ಧಾಪುರ: ನೆಲೆಮಾವು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯ ದಿವ್ಯಾಶೀರ್ವಾದ ಪಡೆದ ಉಸ್ತುವಾರಿ ಸಚಿವ ಮಂಕಾಳು ವೈದ್ಯ
ಸಿದ್ದಾಪುರ : ಮೀನುಗಾರಿಕೆ ಮತ್ತು ಬಂದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭಾನುವಾರ ಸಿದ್ದಾಪುರದ ಶ್ರೀ ಸಂಸ್ಥಾನ ಶ್ರೀಮನ್ನೆಲೆಮಾವಿನ ಮಠಕ್ಕೆ ಭೇಟಿ ನೀಡಿದರು. ನೆಲೆಮಾವು ಮಠದಲ್ಲಿ ಶ್ರೀ ದೇವರ ಹಾಗೂ ಚಾತುರ್ಮಾಸ್ಯ ನಿರತ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಮಾಧವಾನಂದ ಭಾರತೀ ಮಹಾಸ್ವಾಮಿಗಳ ದಿವ್ಯಾಶೀರ್ವಾದವನ್ನು ಪಡೆದರು. ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ವಿವೇಕ ಭಟ್ ಗಡಿಹಿತ್ಲು ಮತ್ತು ಶ್ರೀಮಠದ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ಎಮ್ ಹೆಗಡೆ ಹೆಗ್ನೂರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.