ಗಿರಿನಗರದ ರೋಡ್ ರೇಜ್ ಪ್ರಕರಣ ಅನೇಕರ ನಿದ್ದೆಯನ್ನು ಕೆಡಿಸಿದೆ. ರಸ್ತೆಯಲ್ಲಿ ಹೋಗುತ್ತಿರುವಾಗ ಪುರುಷ ಮತ್ತು ಮಹಿಳೆ ಇಬ್ಬರ ಮಧ್ಯ ಜಗಳ ಆಗಿದ್ದು ಕಾರಿನ ಮಿರರ್ ಕೂಡ ತುಂಡು ಮಾಡಿದ್ದಾರೆ. ಜಗಳ ಕಂಡು ಜನರೇ ಬಿಚ್ಚಿ ಬಿದ್ದಿದ್ದಾರೆ. ಗಿರಿನಗರ ಪೊಲೀಸರು ಮಧ್ಯ ಪ್ರವೇಶ ಮಾಡಿ ಇವರಿಬ್ಬರ ಜಗಳವನ್ನು ಬಿಡಿಸಿ ಕಳಿಸಿದ್ದಾರೆ. ಜನವರಿ 17ರಂದು ಈ ಘಟನೆ ನಡೆದಿದೆ ಅನ್ನೋ ಮಾಹಿತಿ ಲಭ್ಯ ಆಗಿದೆ.