ಸಂಡೂರು: ವಡ್ಡು ಗ್ರಾಮದ ಬಳಿ ರೈಲ್ವೇ ಅಳಿ ತಪ್ಪಿದ ಪರಿಣಾಮ 4 ಗಂಟೆಗಳ ಟ್ರಾಫಿಕ್ ಜಾಮ್
ಸಂಡೂರು ತಾಲೂಕಿನ ವಡ್ಡು ಗ್ರಾಮದ ಬಳಿಯಲ್ಲಿ ನವೆಂಬರ್ 8, ಶನಿವಾರ ಸಂಜೆ 6 ಗಂಟೆಯ ಸುಮಾರಿಗೆ ರೈಲ್ವೇ ಅಳಿಯೊಂದು ತಪ್ಪಿದ ಘಟನೆ ಸಂಭವಿಸಿದೆ. ಈ ಪರಿಣಾಮವಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ಟ್ರಾಫಿಕ್ ದಟ್ಟಣೆ ಸುಮಾರು 3 ಕಿಲೋಮೀಟರ್ ವರೆಗೆ ವಿಸ್ತಾರಿಸಿಕೊಂಡಿತ್ತು ಎಂದು ತಿಳಿದುಬಂದಿದೆ. ವಡ್ಡು–ಜೆಎಸ್ಡಬ್ಲ್ಯೂ ಕಂಪನಿಗೆ ಹೊರಟಿದ್ದ ಸರಕು ರೈಲಿನ ಅಳಿ ತಪ್ಪಿದ ಕಾರಣದಿಂದ ರೈಲ್ವೇ ಕ್ರಾಸಿಂಗ್ ಮುಚ್ಚಲ್ಪಟ್ಟು ಸಂಚಾರ ಅಸ್ತವ್ಯಸ್ತಗೊಂಡಿತ್ತು. ರೈಲ್ವೇ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ದುರಸ್ತಿ ಕಾರ್ಯ ಕೈಗೊಂಡ