ಬೆಂಗಳೂರು ಪೂರ್ವ: ಬಾಣಸವಾಡಿ : ಟ್ರಾನ್ಸಫಾರ್ಮರ್ ಗೆ ಕಾರು ಡಿಕ್ಕಿ ಸಿಸಿಟಿವಿಯಲ್ಲಿ ಡೆಡ್ಲಿ ಆ್ಯಕ್ಸಿಡೆಂಟ್ ದೃಶ್ಯ ಸೆರೆ
ಕಂಟ್ರೋಲ್ ಸಿಗದೆ ಟ್ರಾನ್ಸ್ ಫಾರ್ಮ್ ಗೆ ಕಾರು ಢಿಕ್ಕಿಯಾಗಿ ಅಪಘಾತವಾಗಿದ್ದು ಡೆಡ್ಲಿ ಆ್ಯಕ್ಸಿಡೆಂಟ್ ಸೀನ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿನ್ನೆ ಅಂದರೆ ಮೇ 5ನೇ ತಾರೀಖು ಬಾಣಸವಾಡಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಅತೀ ವೇಗದ ಚಾಲನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಕಾರು ಚಾಲಕನಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ಬಾಣಸವಾಡಿ ಸಂಚಾರಿ ಪೊಲೀಸರು ಮೇ 6ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲಕನ ಬಳಿಮಾಹಿತಿ ಪಡೆದಿದ್ದಾರೆ.