ಕಾರಾಗೃಹ ಡಿಜಿಪಿಯಾಗಿ ಗುರುವಾರ ಬೆಳಗ್ಗೆ 11:30 ರ ಸುಮಾರಿಗೆ ಡಿಜಿಪಿ ಅಲೋಕ್ ಕುಮಾರ್ ಅಧಿಕಾರ ಸ್ವೀಕರಿಸಿದರು. ಇನ್ನು ಇದೇ ವೇಳೆ ಮಾತನಾಡಿದ ಅಲೋಕ್ ಕುಮಾರ್ ಅವರು, ನಮ್ಮ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಬೇಕಿದೆ. ಸರಿಯಾಗಿ ಸಮಸ್ಯೆ ಅರಿತು, ಅದನ್ನು ಗುರುತಿಸಬೇಕು. ಕರ್ನಾಟಕದ ಮೂಲೇ ಮೂಲೆಯಲ್ಲೂ ಕೆಲಸ ಮಾಡಿದ್ದೇನೆ. ಮೊದಲಿಗೆ ಬೈಲಹೊಂಗಲ ಕಾರಾಗೃಹ ಸೇರಿದಂತೆ ಎಲ್ಲಾ ಕಾರಾಗೃಹ ವಿಸೀಟ್ ಮಾಡಿದ್ದೇನೆ. ಕಾರಾಗೃಹ ಅಲ್ಲದೇ ಸುಧಾರಣೆ ಕೂಡ ಅಷ್ಟೇ ಮುಖ್ಯ ಆಗುತ್ತೆ ಎಂದರು.