ಕುಮಟಾ: ರಾಜ್ಯಮಟ್ಟದ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ದ್ವಿತೀಯಸ್ಥಾನ ಪಡೆದ ಕುಮಟಾದ ದಿವ್ಯಾ ನಾಯ್ಕ
ಕುಮಟಾ:
ಕುಮಟಾ: ರಾಜ್ಯಮಟ್ಟದ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ದಿವ್ಯಾ ನಾಯ್ಕ್ ಆಯ್ಕೆ ಯಾಗಿದ್ದಾರೆ.ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜು ವಿಭಾಗದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿನಿ ಕುಮಾರಿ ದಿವ್ಯಾ ಚಂದ್ರಶೇಖರ ನಾಯ್ಕ್ ಗಣನೀಯ ಸಾಧನೆ ಮಾಡಿದ್ದಾರೆ. ಪೋಲ್ ವಾಲ್ಟ್' (Pole Vault) ಸ್ಪರ್ಧೆಯಲ್ಲಿ ಭಾಗವಹಿಸಿದ್ದ ದಿವ್ಯಾ ಅವರು, ತಮ್ಮ ಅತ್ಯುತ್ತಮ ಕ್ರೀಡಾ ಪ್ರದರ್ಶನದ ಮೂಲಕ ದ್ವಿತೀಯ ಸ್ಥಾನವನ್ನುಗಳಿಸಿದರು.