ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ದಾಖಲೆಯನ್ನು ಮುರಿದು, ರಾಜ್ಯ ರಾಜಕೀಯದಲ್ಲಿ ಸುದೀರ್ಘಾವಧಿ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಲಿದ್ದಾರೆ. ಜನವರಿ 6 ರಂದು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದು, ಅವರ ಅಭಿಮಾನಿಗಳು ಈ ಸಾಧನೆಯ ಸಂಭ್ರಮಾಚರಣೆಗಾಗಿ ಅದ್ಧೂರಿ ಔತಣಕೂಟಕ್ಕೆ ಸಿದ್ಧತೆ ನಡೆಸಿದ್ದಾರೆ.