ಹುಬ್ಬಳ್ಳಿ ನಗರ: ಅ.29ರಂದು ಶ್ರೀ ಸಹಸ್ರಾರ್ಜುನ ಜಯಂತ್ಯೋತ್ಸವ: ನಗರದಲ್ಲಿ ಶ್ರೀ ತುಳಜಾಭವಾನಿ ದೇವಸಯ ಕೇಂದ್ರ ಪಂಚ ಸಮಿತಿ ಚೀಪ್ ಟ್ರಸ್ಟಿ ಮೆಹರವಾಡೆ
ಹುಬ್ಬಳ್ಳಿ: ಇಲ್ಲಿನ ದಾಜೀಬಾನ್ ಪೇಟೆಯ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಶ್ರೀ ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚ ಸಮಿತಿ ಹುಬ್ಬಳ್ಳಿ ಧಾರವಾಡ ಆಶ್ರಯದಲ್ಲಿ ಅಕ್ಟೋಬರ್ ೨೯ ರಂದು ಬೆ. ೧೦ ಗಂಟೆಗೆ ಸಮಾಜದ ಕುಲಪುರುಷ ರಾಜರಾಜೇಶ್ವರ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಮಹೋತ್ಸವ ನಿಮಿತ್ತವಾಗಿ ಶ್ರೀ ಸಹಸ್ರಾರ್ಜುನ ಮಹಾರಾಜರ ಬೆಳ್ಳಿ ಮೂರ್ತಿಯ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಚೀಪ್ ಟ್ರಸ್ಟಿ ಸತೀಶ್ ಮೆಹರವಾಡೆ ಹೇಳಿದರು.. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆ.೬ ಗಂಟೆಗೆ ಸಂತ ವಾರಕರಿ ಮಂಡಳಿಯಿಂದ ಕಾಕಡಾರತಿ, ೮ ಗಂಟೆಗೆ ಸಹಸ್ರಾರ್ಜುನ ಮಹಾರಾಜರ ಬೆಳ್ಳಿ ಮೂರ್ತಿಗೆ ಅಭಿಷೇಕ, ಬಳಿಕ ತೊಟ್ಟಿಲು ಹಾಕುವ ಕಾರ್ಯಕ್ರಮ ಹೋಮ-ಹವನ ನೆರವೇರಲಿದೆ ಎಂದರು..