ಯಲ್ಲಾಪುರ: ಪಟ್ಟಣದಲ್ಲಿ ಆರ್ಎಸ್ಎಸ್ನಿಂದ ಆಕರ್ಷಕ ಪಥಸಂಚಲನ
ಆರ್ಎಸ್ಎಸ್ನಿಂದ ಪಥಸಂಚಲನ ಯಲ್ಲಾಪುರ :ರಾಷ್ಟ್ರೀಯ ಸ್ವಯಂಸೇವಕ ಸಂಘ, ಸಂಘ ಶತಾಬ್ದ ವರ್ಷ ಹಾಗೂ ವಿಜಯ ದಶಮಿ ಪ್ರಯುಕ್ತ ಗಣವೇಷದಾರಿ ಸ್ವಯಂಸೇವಕರಿಂದ,ಪಟ್ಟಣದಲ್ಲಿ ಆಕರ್ಷಕ ಪಥಸಂಚಲನ ಕಾರ್ಯಕ್ರಮ ಜರುಗಿತು.ಗ್ರಾಮದೇವಿ ದೇವಸ್ಥಾನ ಪ್ರಾರಂಭಿಸಿ ತಿಲಕ್ ಚೌಕ್,ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ , ವಾಯ ಟಿ ಎಸ್ ಎಸ್ ಶಿಕ್ಷಣ ಸಂಸ್ಥೆ ಯ ಮೈದಾನದಲ್ಲಿ ಮುಕ್ತಾಯ ಗೊಂಡಿತು.ಪಥ ಸಂಚಲನ ಸಂಚರಿಸುವ ರಸ್ತೆಯುದ್ಧಕ್ಕೂ ಕೇಸರಿ ಪತಾಕೆ ತಾಳಿರು ತೋರಣ,ರಂಗೋಲಿ ಗಳಿಂದ ಅಲಂಕರಿಸಲಾಗಿತ್ತು.ಈ ಪಥಸಂಚಲನದಲ್ಲಿ ತಾಲೂಕಿನ ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ನಂತರ ಸಭಾ ಕಾರ್ಯಕ್ರಮ ಜರುಗಿತು.