ಶಿವಮೊಗ್ಗ: ಡಿಕೆಶಿ ಇಷ್ಟು ದಿನಗಳ ಬಳಿಕ ಸ್ಪಷ್ಟವಾದ ಪೋಸ್ಟ್ ಮಾಡಿದ್ದಾರೆ: ನಗರದಲ್ಲಿ ಸಂಸದ ಬಿ ವೈ ಆರ್
ಡಿಸಿಎಂ ಡಿಕೆ ಶಿವಕುಮಾರ್ ಅವರು ಇಷ್ಟು ದಿನಗಳ ಬಳಿಕ ಇವತ್ತು ಸ್ಪಷ್ಟವಾದ ಪೋಸ್ಟ್ ಮಾಡಿದ್ದಾರೆ.ಇದರ ಅರ್ಥ ಸಿಎಂ ಸ್ಥಾನ ಕುರಿತು ಎಲ್ಲೋ ಒಂದು ಕಡೆ ಚರ್ಚೆಯಾಗಿದೆ ಅಂತ ಅರ್ಥ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ. ಶಿವಮೊಗ್ಗ ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಅಪ್ಪಾಜಿಯವರು ಐದು ವರ್ಷ ಇರುತ್ತಾರೆ. ನಮ್ಮ ತಂದೆಯ ಬಗ್ಗೆ ಯಾವುದೇ ಹಗರಣ ಇಲ್ಲ ಎಂದು ತಂದೆಯ ಪರವಾಗಿ ಹೇಳಿದ್ದಾರೆ. ನೋಡೋಣ, ರಾಜ್ಯದಲ್ಲಿ ಸದೃಢವಾದ ಒಂದು ಸರ್ಕಾರ ಹಾಗೂ ಒಳ್ಳೆಯ ಆಡಳಿತ ಕೊಡಬೇಕು ಎಂಬುದು ನಮ್ಮ ನಿರೀಕ್ಷೆ ಎಂದು ಸಂಸದರು ಹೇಳಿದ್ದಾರೆ.