ಕೃಷ್ಣರಾಜನಗರ: ವೃದ್ದರೊಬ್ಬರ ದಾಖಲೆ ಬಳಸಿ ಬೇನಾಮಿ ಕಂಪನಿಗೆ ಸಾಲ ಪಡೆದ ಉದ್ಯಮಿ ವಿರುದ್ಧ ಕೆ ಆರ್ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು
ವೃದ್ದರೊಬ್ಬರ ದಾಖಲೆಗಳನ್ನು ಬಳಸಿ ತಾನು ಆರಂಭಿಸಿದ ಬೇನಾಮಿ ಕಂಪನಿಗೆ ಸಾಲ ಪಡೆದು ಆದಾಯ ತೆರಿಗೆ ಇಲಾಖೆಗೆ ವಂಚಿಸಿದ ಉದ್ಯಮಿ ವಿರುದ್ದ ಮೈಸೂರು ಜಿಲ್ಲೆಯ ಕೆ.ಆರ್. ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬೆಂಗಳೂರಿನ ನಿವಾಸಿ ಕೃಷ್ಣ ರಾಘವನ್(40) ವಿರುದ್ದ ಪ್ರಕರಣ ದಾಖಲಾಗಿದೆ. ಕೆ.ಆರ್. ನಗರದ ನಿವಾಸಿ ವೃದ್ದೆ ಶಶಿಕಲಾ ಅವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನ ಸೃಷ್ಟಿಸಿ ಫೈನಾನ್ಸ್ ಕಂಪೆನಿ ತೆರೆದು ಕೋಟ್ಯಂತರ ರೂ. ವಹಿವಾಟು ನಡೆಸಿದ್ದು ಆದಾಯ ತೆರಿಗೆ ಇಲಾಖೆಗೆ 14 ಕೋಟಿ ರೂ. ತೆರಿಗೆ ವಂಚನೆ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ.