ಔರಾದ್: ಪವರ್ ಗ್ರೀನ್ ಕಂಪೆನಿಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸಿ : ಚಿಮೆಗಾಂವದಲ್ಲಿ ಶಾಸಕ ಪ್ರಭು ಚೌಹಾಣ್
Aurad, Bidar | Nov 22, 2025 ಪವರ್ ಗ್ರೀನ್ ಕಂಪನಿಯಲ್ಲಿ ಹಳಿಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡುವಂತೆ ಶಾಸಕ ಪ್ರಭು ಚೌಹಾಣ್ ಅವರು ಕಂಪನಿಯ ಪ್ರಮುಖರಿಗೆ ಸೂಚಿಸಿದರು. ತಾಲೂಕಿನ ಚಿಮೆಗಾಂವ ಬಳಿ 164 ಎಕರೆ ಪ್ರದೇಶದಲ್ಲಿ 2147 ಕೋಟಿ ವೆಚ್ಚದಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿ ಸ್ಥಳಕ್ಕೆ ಶನಿವಾರ ಬೆಳಿಗ್ಗೆ 11ಕ್ಕೆ ಭೇಟಿ ನೀಡಿ, ಕಂಪೆನಿ ಪ್ರಮುಖ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಪ್ರಮುಖರಾದ ಗಣೇಶ್ ಶಿವಾಜಿ ರಾವ್ ಪಾಟೀಲ್ ಶಿವರಾಜ್ ಅಲ್ಮಾಜಿ ಅನಿಲ್ ಕುಮಾರ್ ಬಿರಾದರ್ ಮತ್ತಿತರರು ಹಾಜರಿದ್ದರು.