ಕೆ.ಜಿ.ಎಫ್: ಗಾಂಜಾ ಮಾರಾಟ ಪ್ರಕರಣದ ಇಬ್ಬರು ಆರೋಪಿಗಳು ಸೆರೆ, ಮಾಲು ವಶಕ್ಕೆ ಪಡೆದ ರಾಬರ್ಟ್ಸನ್ಪೇಟೆ ಪೋಲಿಸರು
KGF, Kolar | Nov 20, 2025 ಗಾಂಜಾ ಮಾರಾಟ ಪ್ರಕರಣದ ಇಬ್ಬರು ಆರೋಪಿಗಳು ಸೆರೆ, ಮಾಲು ವಶಕ್ಕೆ ಪಡೆದ ರಾಬರ್ಟ್ಸನ್ಪೇಟೆ ಪೋಲಿಸರು. ಕೆಜಿಎಫ್ ಪೊಲೀಸ್ ಜಿಲ್ಲೆಯ ರಾಬರ್ಟ್ಸನ್ಪೇಟೆ ವೃv ಕಛೇರಿಯ ಪೊಲೀಸರು ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ, ರೂ.೨,೦೧,೦೦೦/- ಮೌಲ್ಯದ ೪ ಕೆ.ಜಿ ೧೪೦ ಗ್ರಾಂ ಗಾಂಜಾವನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆ ಸರಹದ್ದಿನ ಸ್ಕೂಲ್ ಆಫ್ ಮೈನ್ಸ್ ಕಡೆಯಿಂದ ಪೆದ್ದಪಲ್ಲಿ ಕಡೆ ಹೋಗುವ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದಂತಹ ಖಚಿತ ಮಾಹಿತಿಯನ್ನು ಆಧರಿಸಿ, ರಾಬರ್ಟ್ಸನ್ಪೇಟೆ ದಾಳಿ ನಡೆಸಿ, ಆಂದ್ರಪ್ರದೇಶ ರಾಜ್ಯದ ಕಡಪ ಜಿಲ್ಲೆಯ ಚಮಲರೆಡ್ಡಿಪಲ್ಲಿ ಗ್ರಾಮ ವಾಸಿಯಾದ