ಹುಮ್ನಾಬಾದ್: 2026 27ನೇ ಸಾಲಿನ ಅಭಿವೃದ್ಧಿ ಕ್ರಿಯಾಯೋ ಯೋಜನೆ ಬೇಡಿಕೆಗಳ ಪ್ರಸ್ತಾವನೆ ಶೀಘ್ರ ಸಲ್ಲಿಸಿ : ನಗರದಲ್ಲಿ ಶಾಸಕ ಡಾ. ಸಿದ್ದು ಪಾಟೀಲ್
2026 27ನೇ ಸಾಲಿನಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಯೋಜನೆಗಳ ಕುರಿತಾದ ಅಂದಾಜು ಪ್ರಸ್ತಾವನೆ ಕ್ರಿಯೆ ಯೋಜನೆ ಸಲ್ಲಿಸುವಂತೆ ಶಾಸಕ ಡಾ. ಸಿದ್ದು ಪಾಟೀಲ್ ಅವರು ತಾಲೂಕು ಮಟ್ಟದ ಅನುಷ್ಠಾನಾಧಿಕಾರಿಗಳಿಗೆ ಸೂಚಿಸಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಮಧ್ಯಾಹ್ನ 1:30ಕ್ಕೆ ನಡೆದ ಕರಡು ಅಭಿವೃದ್ಧಿ ಯೋಜನೆ ಕುರಿತ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಎಂಎಲ್ಸಿ ಡಾ. ಚಂದ್ರಶೇಖರ್ ಪಾಟೀಲ ಹಾಗೂ ಅಧಿಕಾರಿಗಳು ಹಾಜರಿದ್ದರು.