ಚಳ್ಳಕೆರೆ: ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್ ಜೊತೆಗೆ ದೀಪಾ ಭಾಸ್ತಿಯನ್ನು ಆಹ್ವಾನಿಸಿ; ನಗರದಲ್ಲಿ ಮುಸ್ಲಿಂ ಮುಖಂಡರು ಒತ್ತಾಯ
ಈ ಬಾರಿಯ ಮೈಸೂರು ದಸರಾ ಉದ್ಘಾಟನೆಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಲೇಖಕಿ ಬಾನು ಮುಸ್ತಾಕ್ ಜೊತೆಗೆ ದೀಪಾ ಬಾಸ್ತಿ ಆಹ್ವಾನಿಸುವಂತೆ ಮುಸ್ಲಿಂ ಮುಖಂಡರು ಒತ್ತಾಯ ಮಾಡಿದ್ದಾರೆ.ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಕರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಸ್ಲಿಂ ಮುಖಂಡ ಸೈಯದ್ ಮಾತನಾಡಿ ಬಾನು ಮುಸ್ತಾಕ್ ಬರೆದ ಕನ್ನಡ ಭಾಷೆಯ ಕಥೆಗಳನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸುವಲ್ಲಿ ದೀಪಾ ಬಾಸ್ತಿ ರವರ ಶ್ರಮವೂ ಅಡಗಿದೆ ಎಂಬುದನ್ನು ಘನ ಸರ್ಕಾರವು ಅರಿತು ಬಾನು ಮುಸ್ತಾಕ್ ಅವರೊಂದಿಗೆ ದೀಪಾ ಭಾಸ್ತಿ ರವರನ್ನು ಸಹ ದಸರಾ ಉದ್ಘಾಟನೆಗೆ ಆಹ್ವಾನಿಸುವುದರ ಮೂಲಕ ರಾಜ್ಯದಲ್ಲಿ ಉಂಟಾಗಿರುವ ಕೆಲವು ವಿವಾದಗಳಿಗೆ ಸರ್ಕಾರ ತೆರೆಎಳಿಯಬೇಕು ಎಂದರು.