ಗದಗ: ಹೊಂಬಳ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚಿಕ್ಕ ಕೆರೆಗೆ ಬಿದ್ದ ಕಾರ: ತಪ್ಪಿದ ಭಾರಿ ಅನಾಹುತ.
Gadag, Gadag | May 28, 2025 ಚಾಲಕನ ನಿಯಂತ್ರಣ ತಪ್ಪಿ ಚಿಕ್ಕ ಕೆರೆಗೆ ಬಿದ್ದ ಕಾರ್. ತಪ್ಪಿದ ಭಾರಿ ಅನಾಹುತ. ತಾಲೂಕಿನ ಹೊಂಬಳ ಗ್ರಾಮದ ಕಲ್ಲು ಕೆರೆಯಲ್ಲಿ ಘಟನೆ ನಡೆದಿದೆ. ರಾಜ್ಯ ಹೆದ್ದಾರಿ 45 ಕ್ಕೆ ಹೊಂದಿಕೊಂಡಿರುವ ಹೊಂಬಳ ಕೆರೆ. ಕಾಂತೀಲಾಲ್ ಎಂಬುವರಿಗೆ ಸೇರಿದ ಕಾರ್.ಇಚಲಕಾರಂಜಿ ಕಡೆಯಿಂದ ಗದಗ ಕಡೆ ಬರುತ್ತಿದ್ದ ವೇಳೆ ನಡೆದ ಘಟನೆ. ಕರ್ವಿಂಗ್ ನಲ್ಲಿ ನಿಯಂತ್ರಣಕ್ಕೆ ಸಿಗದೇ ಕೆರೆಗೆ ಬಿದ್ದ ಕಾರ್. ಕಾರು ಚಾಲಕ ಇಬ್ರಾಹಿಂಸಾಬ್ ಕುರಹಟ್ಟಿ ಒಬ್ಬನೇ ಇದ್ದ ಎಂಬ ಮಾಹಿತಿ. ಕಾರ್ ಅಪಘಾತ ವೇಳೆ ಚಾಲಕನ ಚೀರಾಟ ಕೂಗಾಟ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.